ಬುಧವಾರ, ಡಿಸೆಂಬರ್ 1, 2010

Irpu Falls & brahmagiri trek-2010

Irpu falls & Brahmagiri Trek



ಕೂರ್ಗ್ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದೇ ಮಂಜು. ರಾಜರತ್ನಂ ಮಡಿಕೇರಿ ಮೇಲ ಮಂಜು ಎಂದು ಹೇಳಿದ ಹಾಗೆ ಕೊಡಗು ಹಾಗು ಮಂಜು ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುವ ನಾನು ಬ್ಯಾಂಗಲೋರ್ ಅಸ್ಸೆನ್ದೆರ್ಸ್ ಜೊತೆಗೆ ಮತ್ತೊಂದು ಪ್ರವಾಸ ಹೊರಟೆ ಇರ್ಪು ಜಲಪಾತ ಮತ್ತು ಬ್ರಹ್ಮಗಿರಿ ಬೆಟ್ಟದೆಡೆಗೆ. ಅಕ್ಟೋಬರ್ ೨೩-೨೪ ರಂದು ಪ್ರವಾಸ ಅಥವಾ ಟ್ರೆಕ್ಕಿಂಗ್ ಫಿಕ್ಸ್ ಆಗಿತ್ತು. ಕಷ್ಟಪಟ್ಟು ಬೇಗಎದ್ದು  ಆಫೀಸ್ ಗೆ ಹೋಗಿ ಕೆಲಸ ಮುಗಿಸಿ ಪ್ರವಾಸದ ಪಿಕ್ ಅಪ್ ಪಾಯಿಂಟ್ ಗೆ ತಲುಪುವಷ್ಟರಲ್ಲಿ ಸಾಕಾಗಿ ಹೋಗಿತ್ತು.
೨ ಟೆಂಪೋ ತ್ರವೆಲ್ಲೆರ್ ಬುಕ್ ಮಾಡಿದ್ದರು ಸ್ನೇಹಿತ ಸತೀಶ್ . ಪೀ ಈ ಎಸ್  ಕಾಲೇಜಿನಿಂದ ಹೊರಟು ಬೆಂಗಳೂರು ದಾಟುವುದರಲ್ಲಿ ಮಧ್ಯ ರಾತ್ರಿ ಮೀರಿ ಹೋಗಿತ್ತು. ರಾತ್ರಿ ಚೆನ್ನಾಗಿ ನಿದ್ರೆ ಬಂತಾ? ಪ್ರಯಾಣ ಹೇಗಿತ್ತು ? ಎಂದೆಲ್ಲ ಕೇಳಲೇ ಬೇಡಿ. ಯಾವಾಗ ಬೆಳಿಗ್ಗೆ ಆಗುತ್ತದೋ ಎಂದು ಚಾತಕ  ಪಕ್ಷಿಯ ಹಾಗೆ ಕಾಯುವಂತಾಯಿತು. ಅದರಲ್ಲಿಯೂ ಸೌಮ್ಯ ನಂಥವರು ಸುಖವಾದ ನಿದ್ರೆ ಮಾಡಿದ್ದೂ ನೋಡಿ ಅನಿಸಿದ್ದು :- "ಹೀಗೂ ಉಂಟೆ":-)

ಗೋಣಿ ಕೊಪ್ಪಲ್ ನಿಂದ ಎಡಕ್ಕೆ ತಿರುಗಲು ಮರೆತು ೧೬ ಕಿಮಿ ಮುಂದಕ್ಕಿರುವ ವಿರಾಜಪೇಟೆಯಲ್ಲಿ ರಾಜರಂತೆ ಬೆಳ್ಳಂ ಬೆಳಿಗ್ಗೆ ಚಹಾ ಸೇವನೆ ಆಯಿತು. ಬಂದ ದಾರಿಗೆ ಸುಂಕವಿಲ್ಲ ಅನ್ನುವಂತೆ ಪುನಃ ಹಿಂದಕ್ಕೆ ಬಂದು ಸರಿಯಾದ ರಸ್ತೆ ಹಿಡಿದು ಗೋಣಿ ಕೊಪ್ಪಲ್ ತಲುಪಿದೆವು. ಅಲ್ಲಿ ಬೇಗನೆ ತಲುಪಿದ ತಪ್ಪಿಗೊಸ್ಕರ ಸ್ವಲ್ಪ ವಾಯು ವಿಹಾರ ಮಾಡಿದೆವು. ನಂತರ ಸ್ಥಳಿಯರೊಂದಿಗೆ ಮಾತನಾಡಿದ ಬಳಿಕ ಕುರ್ಚಿ ಗ್ರಾಮದ ಇರ್ಪು ಫಾಲ್ಸ್ ಫಾರೆಸ್ಟ್ ಚೆಕ್ಪೋಸ್ಟ್ ಕಡೆಗೆ ಹೊರಟೆವು. ಹಲವು ಸ್ನೇಹಿತರು ಟೆಂಪೋ ಮೇಲೆ ಕುಳಿತುಕೊಂಡು ಕೊಡಗಿನ ಮಂಗಗಳು ವಿಸ್ಮಯಪಡುವ ಹಾಗೆ ಕುಣಿದಾಡಿದರು.



ಮೊದಲು ಇರ್ಪು ಫಾಲ್ಸ್ ನೋಡಿ ಆನಂತರ ನರಿಮಲೆ ಅರಣ್ಯ ಇಲಾಖೆಯ ವಸತಿ ಗೃಹಕ್ಕೆ ಚಾರಣ ಮಾಡುವುದು ಎಂದು ಡಿಸೈಡ್ ಮಾಡಿದೆವು. ಎಲ್ಲರೂ ಒಟ್ಟಿಗೆ ಬಂದರೆ  ರಶ್ ಆಗಿ ಫೋಟೋ ತೆಗೆಯಲು ತೊಂದರೆ ಆಗುತ್ತದೆ ಎಂದು ಗೀತಳೊಂದಿಗೆ  ಬೇಗನೆ ಹೊರಟು ಫೋಟೋ session ಆಯಿತು. ತಿರುಗಿ ಬಂದು ನೋಡಿದಾಗ ಸತೀಶ್ ಮತ್ತು ಆರ್ ಪೀ ನಾಪತ್ತೆ . ಫಾರೆಸ್ಟ್ ಗಾರ್ಡ್ ಬರುವುದಕ್ಕೆ ಬಹಳ ಸಮಯ ಹಿಡೀತು. ಯಾವಾಗ ಬರ್ತಾನೋ ಗೋವಿಂದ-ನಾರಾಯಣ ಎಂದು ಹೇಳುವಹೊತ್ತಿಗೆ ನಾರಾಯಣ ಫಾರೆಸ್ಟ್ ಗಾರ್ಡ್ ಬಂದೆ ಬಿಟ್ಟ!

ಅನಂತರ ಎಲ್ಲರೂ ನರಿಮಲೆ ಗೆಸ್ಟ್ ಹೌಸ್ ಗೆ ಚಾರಣ ಸುರು ಮಾಡಿದೆವು. ಇದ್ದಕ್ಕಿದಂತೆ ಸ್ಟಾರ್ಟ್ ಆದ ಮಳೆ ನಮಗೆ ಒಳ್ಳೆ ಸಾಥ್ ನೀಡಿತು.
ಇಂಬಳ ಗಳಿಗೆ ರಕ್ತದಾನ ಮಡಿ ರಕ್ತದಾನ ಮಹದಾನ ಎಂದು ಸಾರಿ ಗೆಸ್ಟ್ ಹೌಸೆ ತಲುಪುವ ವೇಳೆ ಮಧ್ಯಾನ್ಹ ಆಗಿತ್ತು. ಅಲ್ಲಿ ಇದ್ದ ಬೇರೆ ಟೀಂ ಜೊತೆ ಟ್ರೆಕ್ ಗಳ ಬಗ್ಗೆ ಮಾತು-ಕಥೆ ಮುಗಿಸಿ ಸಂಜೆಯ ಪರಿಚಯ ಕಾರ್ಯಕ್ರಮಕ್ಕೆ ಕುಳಿತೆವು
.
ಆಮೇಲೆ ಊಟ ಮುಗಿಸಿ ಕಷ್ಟ ಪಟ್ಟು ಅಡ್ಜಸ್ಟ್ ಮಾಡಿಕೊಂಡು ಮಲಗಿದೆವು! ಫಾರೆಸ್ಟ್ ಗಾರ್ಡ್ ನಾರಾಯಣನ ಪ್ರಕಾರ ನಾವೆಲ್ಲ ಮರ ಕೆದೆಯಲು ಉಪಯೋಗಿಸುವ ಗರಗಸದ ತರಹ ಶಬ್ದ ಮಾಡಿ ಗೊರಕೆ ಹೊಡೆಯುತ್ತಿದ್ದೆವು!
ಬೆಳಿಗ್ಗೆ ಎದ್ದ್ದು ಮಿಲಿಟರಿ ಆಫೀಸೆರ್ಗಳಂತೆ ರೆಡಿ ಆಗಿ ಬ್ರಹ್ಮಗಿರಿ ಕಡೆಗೆ ಹೊರಟೆವು. ದಾರಿ ಮಧ್ಯದಲ್ಲಿ ಕಡವೆ,ಕಾಡೆಮ್ಮೆ ಮತ್ತು ಆನೆಯ ದರ್ಶನ ಭಾಗ್ಯವೂ ಲಭಿಸಿತು!!!

ಎಲ್ಲರೂ ಕಷ್ಟಪಟ್ಟು ಬ್ರಹ್ಮಗಿರಿ ಹತ್ತಿದೆವು.ಅಲ್ಲಿಂದ ಕಾಣುವ ನೋಟ ಮಾತ್ರ ಮರೆಯಲಾಗದ್ದು! ಬೇಕಾದ ಪೋಸ್ ಕೊಟ್ಟು ಫೋಟೋ ತೆಗಿಸಿ ಕೊಂಡೆವು.


ಬ್ರಹ್ಮಗಿರಿಯಿಂದ ಇಳಿದು (ಜಾರಿ) ನರಿಮಲೆ ಫಾರೆಸ್ಟ್ ಗೆಸ್ಟ್ ಹೌಸ್ ಸೇರಿದೆವು. ಆರಾಮಾಗಿ ಊಟ ಮುಗಿಸಿ ಇರ್ಪು ಫಾಲ್ಸ್ ಕಡೆ ಪ್ರಯಾಣ ಬೆಳಸಿದೆವು. ಇರ್ಪು ಫಾಲ್ಸ್ನಲ್ಲಿ ಸಾವಕಾಶವಾಗಿ ಸ್ನಾನ ಮಾಡಿ ಕೆಳಗಡೆ ಇದ್ದ ಹೋಟೆಲ್ನಲ್ಲಿ ಬಜ್ಜಿ ತಿಂದು ಟೀ ಕುಡಿದು ಗೊನಿಕೊಪ್ಪಾಲ್ ಗೆ ಊಟಕ್ಕೆ ಹೊರಟೆವು. ಅಲ್ಲಿ ಹೋಟೆಲ್ನಲ್ಲಿ ಚೆನ್ನ್ನಾಗಿ ಊಟ ಮಾಡಿ ಬೆಂಗಳೂರಿಗೆ ಹೊರಟೆವು. ನೆನಪಿನಲ್ಲಿ  ಇನ್ನೂ ಬ್ರಹ್ಮಗಿರಿ ಬೆಟ್ಟವೇ ಇತ್ತು!




  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ